email: [email protected] | phone: (08192) 222008 / 224914 | Sri Peetha: 94819 27666

 ಜನವರಿ 22 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಅಯೋದ್ಯೆಯಲ್ಲಿ ಶ್ರೀರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಗೆ ಶ್ರೀರಾಮ ಮಂದಿರ ಪ್ರತಿಷ್ಟಾನ ಟ್ರಸ್ಟ್, ನವರು ಆಹ್ವಾನ ನೀಡಿದ್ದಾರೆ. ಜಗದ್ಗುರುಗಳು ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಶ್ರೀ ಪೀಠದ ಆಡಳಿತಾಧಿಕಾರಿ ಡಾ.ರಾಜ್ ಕುಮಾರ್ ತಿಳಿಸಿದ್ದಾರೆ.

ದಿನಾಂಕ : 29-12-2023

ಇವರಿಗೆ,

ಸಂಪಾದಕರು

ಕನ್ನಡ ದಿನಪತ್ರಿಕೆ ಹಾಗೂ  ದೃಶ್ಯ ಮಾಧ್ಯಮ. 



ಮಾನ್ಯರೆ, 

ದಿನಾಂಕ 26-12-2023ರಂದು ನಡೆದ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟಿನ ಸಭೆಯಲ್ಲಿ  ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮೀಜಿಯವರ ಸಾನಿಧ್ಯದಲ್ಲಿ ಹಾಗೂ ಶ್ರೀಪೀಠದ ಪ್ರಧಾನ  ಧರ್ಮದರ್ಶಿಗಳಾದ ಶ್ರೀ ಬಿ. ಸಿ. ಉಮಪತಿಯವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀ ಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್.ಪಿ. ರಾಜಕುಮಾರರವರ ನೇತೃತ್ವದಲ್ಲಿ  ಶ್ರೀ ಪೀಠದ . ಎಲ್ಲಾ  ಧರ್ಮದರ್ಶಿಗಳು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳ ನಡೆದ ಸಭೆಯಲ್ಲಿ  ಈ ಬಾರಿ ರಾಜ್ಯದಲ್ಲಿ ಬರಗಾಲ ಇರುವುದು ಹಾಗೂ ನಮ್ಮ ಸಮಾಜವು ಕೃಷಿ ಪ್ರಧಾನ ರೈತಾಪಿ ವರ್ಗ ಆಗಿರುವುದರಿಂದ  ಜನರು ಸಂಕಷ್ಟದಲ್ಲಿ ಇದ್ದಾರೆ ಆದ್ದರಿಂದ “ಹರ ಜಾತ್ರಾ ಮಹೋತ್ಸವ”ವನ್ನು ಈ ವರ್ಷ ಅತ್ಯಂತ ಸರಳರೀತಿಯಲ್ಲಿ 2024 ಜನವರಿ 14 ಮತ್ತು 15 ರಂದು “ಹರ ಜಾತ್ರಾ ಮಹೋತ್ಸವ”ವನ್ನು ಶ್ರೀಪೀಠದಲ್ಲಿ ಸರಳವಾಗಿ  ಧಾರ್ಮಿಕ ರೂಪದಲ್ಲಿ ಆಚರಿಸಲು ತೀರ್ಮಾನಿಸಲಾಯಿತು.  ಸರಳ “ಹರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ವಿವರಗಳನ್ನು ಮುಂದಿನ ದಿನಗಳಲ್ಲಿ ಸಮಾಜ ಬಾಂಧವರಿಗೆ ತಿಳಿಸುತ್ತೇವೆ ಎಂದು ಈ ಮೂಲಕ ಶ್ರೀಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್ ಪಿ  ರಾಜಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

 

(ಈ ಸುದ್ದಿಯನ್ನು ತಮ್ಮ ಪತ್ರಿಕೆಗಳಲ್ಲಿ ರಾಜ್ಯದ ಸುದ್ದಿಯಾಗಿ ಪ್ರಕಟವಾಗುವಂತೆ ಮಾಡಲು ಈ ಮೂಲಕ ವಿನಂತಿ) 

ವಂದನೆಗಳೊಂದಿಗೆ

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪರವಾಗಿ


ಶ್ರೀ ಎಚ್. ಪಿ. ರಾಜಕುಮಾರ್ 

ಶ್ರೀಪೀಠದ ಆಡಳಿತಾಧಿಕಾರಿಗಳು

Back to Top